ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ನೆಬ್ಬೂರರಿಗೆ 2014ರ ``ಕಾಳಿಂಗ ನಾವಡ ಪ್ರಶಸ್ತಿ``

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಆಗಸ್ಟ್ 26 , 2014
ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆ ಹನುಮಂತನಗರದ ಕೆ.ಹೆಚ್. ಕಲಾಸೌಧದಲ್ಲಿ-೨೦೧೪ರ ಸಾಲಿನ “ಕಾಳಿಂಗ ನಾವಡ ಪ್ರಶಸ್ತಿ” ಯನ್ನು, 10 ಸಾವಿರ ನಗದು ಹಣ, ಪ್ರಶಸ್ತಿ ಪತ್ರ, ಸ್ಮರಣಿಕೆಯೊಂದಿಗೆ ವೃತ್ತಿಪರ ಯಕ್ಷಗಾನದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ, ಹಿರಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆ ಅವರಿಗೆ ನೀಡಿ ಗೌರವಿಸಿತು. ಧ್ವಜಪುರದ ನಾಗಪ್ಪಯ್ಯ ರಚಿಸಿದ ಅಂಬರೀಷ್ ಭಟ್ ನಿರ್ದೇಶನದಲ್ಲಿ ದಮಯಂತಿ ಪುನರ್ ವಿವಾಹ ಯಕ್ಷಗಾನ, ಪ್ರದರ್ಶನ ಕೂಡಾ ಪ್ರೇಕ್ಷಕರನ್ನು ಮೋಡಿಗೊಳಿಸಿತು.

ರಾಷ್ಟ್ರಿಯ ನಾಟಕ ಶಾಲೆಯ ಪ್ರಾದೇಶಿಕ ನಿರ್ದೇಶಕರಾದ ಸುರೇಶ್ ಆನಗಳ್ಳಿ, ಡಮ್ಮಳಗಿ ಡೆವೆಲಪರ್ಸ್‌ನ ಪುರುಷೋತ್ತಮ ಅಡಿಗ, ಕಾಳಿಂಗ ನಾವಡರ ಅಣ್ಣ ಗಣಪಯ್ಯ ನಾವಡ, ಕಲಾ ಪ್ರೋತ್ಸಾಹಕ ಮಹಾಬಲೇಶ್ವರ ಅಡಿಗ, ಯಕ್ಷಗಾನ ಸಂಶೋಧಕರಾದ ಡಾ ಸಿ. ಆನಂದರಾಮ ಉಪಾಧ್ಯ, ಕರಬ ಪ್ರತಿಷ್ಠಾನದ ದೇವರಾಜ ಕರಬ, ಕಲಾಕದಂಬ ಸಂಸ್ಥೆಯ ಗೌ.ಅಧ್ಯಕ್ಷರಾದ ಅಂಬರೀಷ್ ಭಟ್ ಅವರು ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ನೆಬ್ಬೂರು ನಾರಾಯಣ ಹೆಗಡೆಯವರಿಗೆ ಸನ್ಮಾನ
ಉಪ್ಪೂರರೊಂದಿಗೆ ಶೃತಿ ಬಾರಿಸುತ್ತಿದ್ದ ನನ್ನ ಅನುಭವವೇ ನನ್ನನ್ನು ಭಾಗವತನಾಗಿ ಇಂದಿನ ಪ್ರಶಸ್ತಿಗೆ ಬಾಜನರನ್ನಾಗಿಸಿದೆ ಎಂದರೆ ತಪ್ಪಲ್ಲ. ಪೌರಾಣಿಕ ಪ್ರಸಂಗ ಗಳನ್ನಲ್ಲದೆ ಬೇರೆ ನವ್ಯ ಪ್ರಸಂಗಕ್ಕೆ ನಾನು ಹೋದವನಲ್ಲ. ನಾವಡರ ಶೈಲಿ ಬೇರೆ ಯಾದರೂ ನಡೆ ಒಂದೇ. ಇಂದು ಅವರಿಗಿಂತಲೂ ಶ್ರೇಷ್ಠರಾಗಿದ್ದ ಗುರು ಉಪ್ಪೂರರು, ತಂದೆ ರಾಮಚಂದ್ರ ನಾವಡರ ಶೈಲಿ ಉಳಿಯದಿದ್ದರೂ ಕಾಳಿಂಗ ನಾವಡರ ಶೈಲಿ ಉಳಿದಿರುವುದು ನಿಜಕ್ಕೂ ಮೆಚ್ಚುವಂತಾದ್ಧು. ಅದೇ ಕಾಳಿಂಗ ನಾವಡರ ಶಕ್ತಿ. ಕೆಲವರು ಬದುಕಿ ಸತ್ತರೆ ಇನ್ನು ಕೆಲವರು ಸತ್ತು ಬದುಕುತ್ತಾರೆ ಎಂದು ಕಿರಿ ವಯಸ್ಸಿನಲ್ಲೇ ಅಗಲಿದ ಭಾಗವತರಾದ ಕಾಳಿಂಗ ನಾವಡ ನೆನಪಿನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೆಬ್ಬೂರು ನಾರಾಯಣ ಹೆಗಡೆಯವರು ಅಭಿಪ್ರಾಯಪಟ್ಟರು.

ಹಿಂದೂಸ್ಥಾನಿ ಕರ್ನಾಟಕಿ ಸಂಗೀತದಂತೆಯೆ ಭಿನ್ನವಾದ ವಿಶಿಷ್ಠವಾದ ಸ್ಥಾನವನ್ನು ಯಕ್ಷಗಾನಕ್ಕೆ ಕೊಟ್ಟಿಲ್ಲವೆನ್ನುವ ಕೊರಗು ನನ್ನನ್ನು ಕಾಡುತ್ತಿದೆ. ಯಕ್ಷಗಾನದಲ್ಲೂ ಇರುವ ಸಂಪ್ರದಾಯಿಕ ಚೌಕಟ್ಟಿನಲ್ಲಿರುವ ರಾಗ ಸಂಪ್ರದಾಯವನ್ನು ಬಳಕೆಯಲ್ಲಿರಿಸಬೇಕೆನ್ನುವ ಅಪೇಕ್ಷೆ ನನ್ನದು. ಪ್ರಶಸ್ತಿಗೆ ಬಾಜನರಾದ ನೆಬ್ಬೂರರು ಕಲಾವಲಯದಲ್ಲಿ ಅತ್ಯುನ್ನತ ಗೌರವ ಪಡೆದವರೆಂದು ಸುರೇಶ ಆನಗಳ್ಳಿ ಹೇಳಿದ್ದಲ್ಲದೆ ಯಕ್ಷಗಾನ ರಂಗಭೂಮಿಗಳೆರಡರಲ್ಲೂ ಸಮಾನವಾಗಿ ತೊಡಗಿರುವ ಒಬ್ಬ ಅಪ್ರತಿಮ ಕಲಾವಿದ ರಾಧಾಕೃಷ್ಣ ಉರಾಳರು ತಮ್ಮ ಸಂಸ್ಥೆಯ ಮೂಲಕ ಗಮನಾರ್ಹ ಕೆಲಸ ಸಾಧಿಸುತ್ತಿದ್ದಾರೆ ಎನ್ನುವುದಾಗಿ ಶ್ಲಾಘಿಸಿದರು.

ಪ್ರಶಸ್ತಿ ಪ್ರದಾನ ಪೂರ್ವದಲ್ಲಿ ಶ್ರೀನಿವಾಸ ಸಾಸ್ತಾನ್ ಅವರ ಕರ್ನಾಟಕ ಕಲಾದರ್ಶಿನಿ ತಂಡ ಸುಧೀಂದ್ರ ಕೊಡವೂರ್ ನಿರ್ದೇಶನದಲ್ಲಿ ಅಭಿನಯಿಸಿದ ಅಭಿಮನ್ಯು ವಧೆ ಯಕ್ಷಗಾನ ನೃತ್ಯ ರೂಪಕ, ಅದಕ್ಕೆ ಬೆಳಕಿನ ವಿನ್ಯಾಸ ಮಾಡಿದ ನಂದಕಿಶೋರ್, ಮನೋಜ್ಞ ಅಭಿನಯ ನೀಡಿದ ರಾಧಾಕೃಷ್ಣ ಉರಾಳ್, ಸುರೇಂದ್ರ, ಬಸವ, ರಮೇಶ್, ಕಾಂಚನ್, ಹಿಮ್ಮೇಳದಲ್ಲಿಸಹಕರಿಸಿದ ಪಾಟಕ್, ರಾಮ ಬಾಯರಿ, ಸುಬ್ರಾಯ ಹೆಬ್ಬಾರ್, ಹಿನ್ನೆಲೆಯಲ್ಲಿ ಸಹಕರಿಸಿದ ವಿಶ್ವನಾಥ ಉರಾಳ, ವಿನಯ ಭಟ್, ನಿತ್ಯಾನಂದ ನಾಯಕ್, ಭರತ್ ಗೌಡ ಅವರ ಪರಿಶ್ರಮದಲ್ಲಿ, ಆರ್ಥಿಕ ವಾಗಿ ಸಹಕರಿಸಿದ ಡಮ್ಮಳಗಿ ಡೆವೆಲಪರ್ಸ್, ಕರ್ಣಾಟಕ ಬ್ಯಾಂಕ್, ಕನ್ನಡ ಸಂಸ್ಕೃತಿ ಇಲಾಖೆ, ನೆರವಿನೊಂದಿಗೆ ಕಲಾಕದಂಬ ಯಕ್ಷ ಉತ್ಸವ - ಕಾಳಿಂಗ ನಾವಡ ಪ್ರಶಸ್ತಿ ಪ್ರದಾನ ಯಶಸ್ವಿಯಾಗಿ ಮೂಡಿಬಂತು.



******************












Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ